ಕೋಳಿಗಳಿಗೆ ಲಸಿಕೆ- ನೀವು ತಿಳಿಯಬೇಕಾದ ಅಂಶಗಳು

20 Aug 2021 07:54 PM Comment(s) By Aqgromalin Team

ಭಾರತೀಯ ಕೃಷಿಯಲ್ಲಿ ಕೋಳಿ ಸಾಕಣೆ ಪಶುಸಂಗೋಪನೆ ವಲಯದ ಮುಖ್ಯಭಾಗವೆಂದು ಪರಿಗಣಿಸಲಾಗಿದೆ. ಆಹಾರ ಜೀವನೋಪಾಯದ ಪ್ರಮುಖ ಮೂಲವಾಗಿರುವುದರಿಂದ, ಇದು ಅನೇಕ ಗ್ರಾಮೀಣ ಕುಟುಂಬಗಳಿಗೆ ನೆರವಾಗಿ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.  ಪಶುಸಂಗೋಪನೆ ಮತ್ತು ಕೃಷಿಯಂತಹ ಇತರ ವಿಧಾನಗಳು ಕುಸಿಯುತ್ತಿರುವಾಗ ಕೋಳಿಸಾಕಣೆ ಆದಾಯಕ್ಕೆ ಉತ್ತಮ ಮೂಲವಾಗಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

Poultry Vaccination All you need to know

 

ಪ್ರತೀ ವರ್ಷ ಸುಮಾರು 6% ಬೆಳವಣಿಗೆ ದಾಖಲಿಸುವ ಮೂಲಕ ಕೋಳಿಸಾಕಣೆ ಭಾರತದ ಆರ್ಥಿಕತೆಗೆ ಅತ್ಯಂತ ಪ್ರಮುಖವಾಗಿದೆ. ಪ್ರಸ್ತುತ 1 ಲಕ್ಷ ಕೋಟಿ ರೂಪಾಯಿ ಅಥವಾ 15.38 ಬಿಲಿಯನ್ ಯುಎಸ್ ಡಾಲರ್ ಮೌಲ್ಯ ಹೊಂದಿರುವ ಕೋಳಿಸಾಕಣೆ, 2024 ರೊಳಗೆ 4,340 ಬಿಲಿಯನ್ ತಲುಪುವ ನಿರೀಕ್ಷೆಯಿದೆ. ವೇಗವಾಗಿ ಬೆಳೆಯುತ್ತಿರುವ ಇಂತಹ ಉದ್ದಿಮೆಯಲ್ಲಿ, ಯಾವುದೇ ಅಡಚಣೆಯಿಲ್ಲದೇ ಉದ್ದಿಮೆ ಬೆಳೆಯುವುದನ್ನು ಖಚಿತಪಡಿಸಿಕೊಳ್ಳಲು, ಯಾವಾಗಲೂ ಸುರಕ್ಷತೆ ವಹಿಸಬೇಕು. Poultry Vaccination All you need to know


ಉತ್ಪಾದನೆ ಹೆಚ್ಚುವಾಗ ನಷ್ಟ ಕಡಿಮೆ ಮಾಡುವ ಅತ್ಯಂತ ಪರಿಣಾಮಕಾರಿ ವಿಧಾನವೆಂದರೆ, ರೋಗ ಮತ್ತು ಮರಣದ ಪ್ರಮಾಣ ಕಡಿಮೆ ಮಾಡುವುದು. ಅವುಗಳ ಆರೋಗ್ಯದ ಮೇಲೆ ಗಮನ ನೀಡುವುದು, ರೋಗಪತ್ತೆ ಹಾಗೂ ರೋಗ ನಿವಾರಣೆ ಕೋಳಿಸಾಕಣೆ ವಲಯಕ್ಕೆ ಅತ್ಯಂತ ಮುಖ್ಯವಾಗಿದ್ದು, ಇದನ್ನು ಸಂಶೋಧನೆ ಮತ್ತು ಲಸಿಕೆ ಅಭಿವೃದ್ಧಿಯ ಮೂಲಕ ಮಾಡಬಹುದು.  


ಲಸಿಕೆ ಎಂದರೇನು? 

ಲಸಿಕೆ ಜೈವಿಕ ಭದ್ರತೆಯನ್ನು ಖಚಿತಪಡಿಸುವ ಅತ್ಯಂತ ಪ್ರಮುಖ ಸಾಧನವಾಗಿದೆ. ಇದು ಕೋಳಿಸಾಕಣೆ ಕೇಂದ್ರವನ್ನು ಸಂಪೂರ್ಣವಾಗಿ ವಿಭಜಿಸುವ ಮಾರಣಾಂತಿಕ ರೋಗಗಳನ್ನು ತಡೆಯುವ ವಾಹಕವಾಗಿದೆ. ಪರಾವಲಂಬಿಗಳು, ಪ್ರೊಟೋಜ಼ೊವಾ, ಶಿಲೀಂಧ್ರ, ಬ್ಯಾಕ್ಟೀರಿಯಾ ಮತ್ತು ವೈರಾಣುಗಳಂತಹ ಅನೇಕ ರೋಗಕಾರಕ ಸೂಕ್ಷ್ಮಜೀವಿಗಳು ಕಂಡುಬರುತ್ತವೆ. ಈ ಎಲ್ಲಾ ಸೂಕ್ಷ್ಮಜೀವಿಗಳನ್ನು ಔಷಧಿಗಳ ಬಳಕೆಯಿಂದ ನಾಶಪಡಿಸಬಹುದು. ಬ್ಯಾಕ್ಟೀರಿಯಾ ಆಕ್ರಮಣಕ್ಕೆ ಪ್ರತಿಕಾಯಗಳು ಲಭ್ಯವಿದೆ, ಆದರೆ ವೈರಾಣು ಬಾಧೆಗೆ ಯಾವುದೇ ಪ್ರತಿರೋಧಕಗಳಿಲ್ಲ; ಆದ್ದರಿಂದ ಲಸಿಕೆ ನೀಡುವುದು ಅತ್ಯಂತ ಅಗತ್ಯ.


ವೈರಾಣು ಸಾಂಕ್ರಾಮಿಕವಾಗಿ ಕೋಳಿಗಳಿಗೆ ರೋಗ ಹರಡುವುದನ್ನು ತಡೆಯಲು ಮತ್ತು ನಿಯಂತ್ರಿಸಲು ಲಸಿಕೆಯನ್ನು ಬಳಸಲಾಗುತ್ತದೆ. ಸ್ವಚ್ಛತೆಯೊಂದಿಗೆ, ಕೋಳಿಕೃಷಿಯ ಹಂತದಲ್ಲಿ ರೋಗ ಉಂಟಾಗುವುದನ್ನು ತಡೆಯಲು ಅಥವಾ ಕಡಿಮೆ ಮಾಡಲು  ಸೋಂಕು ಆರಂಭಕ್ಕೆ ಮೊದಲು ಲಸಿಕೆ ನೀಡಬೇಕು, ಈ ಮೂಲಕ ಕೋಳಿಗಳ ಉತ್ಪಾದನೆ ಹೆಚ್ಚಿಸಬಹುದು.

ಇದರೊಂದಿಗೆ, ಆಗತಾನೇ ಹುಟ್ಟಿದ ಕೋಳಿಮರಿಗಳು ಮಾರಾಟಕ್ಕೆ ಬೆಳೆದು ದೊಡ್ಡದಾಗುವ ಮೊದಲು, ಮೊಟ್ಟೆ ಇಡುವ ಎಲ್ಲಾ ಕೋಳಿಗಳಿಗೆ ಲಸಿಕೆ ನೀಡಲಾಗುತ್ತದೆ.

Aqai ನಲ್ಲಿ, ನಾವು ನಮ್ಮ ಕೋಳಿಗಳ ರೋಗನಿರೋಧಕತೆಯನ್ನು ಸೂಕ್ಷ್ಮವಾಗಿ ಗಮನಿಸಿ ಖಚಿತಪಡಿಸುತ್ತೇವೆ. ಪ್ರತಿಯೊಂದು ತಳಿಗೂ ಎಚ್ಚರಿಕೆಯಿಂದ ಲಸಿಕೆ ನೀಡುವ ಮೂಲಕ ರೋಗಕಾರಕಗಳನ್ನು ನಿಷ್ಕ್ರಿಯಗೊಳಿಸುವ ಪ್ರತಿಕಾಯಗಳನ್ನು ಉತ್ಪಾದಿಸುವುದನ್ನು ಮತ್ತು ಕೋಳಿಗಳು ಉತ್ಪಾದಕವಾಗಿ ಆರೋಗ್ಯಕರವಾಗಿರುವುದರ ಭರವಸೆಯನ್ನು ನೀಡುತ್ತೇವೆ.


To know more about our certified farms, infrastructure and operations, click here 

Get it on App Store
Get it on Play store
Share -
Added to cart
Your cart has item(s).
- Can't add this product to the cart now. Please try again later.
Quantity updated
- An error occurred. Please try again later.
Deleted from cart
- Can't delete this product from the cart at the moment. Please try again later.