ಬಿಳಿ ಪೆಕಿನ್ ಬಾತುಕೋಳಿಗಳಿಗೆ ಲಸಿಕೆ

12 Aug 2021 12:50 PM Comment(s) By Aqgromalin Team

ಪೆಕಿನ್ ಅಥವಾ ಬಿಳಿ ಪೆಕಿನ್ ಎನ್ನುವುದು ಮುಖ್ಯವಾಗಿ ಮೊಟ್ಟೆ ಮತ್ತು ಮಾಂಸಕ್ಕಾಗಿ ಸಾಕುವ ಬಾತುಕೋಳಿಯಾಗಿದ್ದು, ಇದು ಚೀನಾದ ಮಲ್ಲಾರ್ಡ್ ನ ತಳಿಯಾಗಿದೆ. ಇವು ಹಳದಿ ಕೊಕ್ಕು, ಕ್ರೀಂ ಮಿಶ್ರಿತ ಬಿಳಿ ಪುಕ್ಕಗಳು (ಕೆಲವೊಮ್ಮೆ ಹಳದಿಮಿಶ್ರಿತ ಲೇಪನ), ಕಿತ್ತಳೆ ಬಣ್ಣದ ಜಾಲಪಾದ ಮತ್ತು ಕಾಲ್ಬೆರಳುಗಳನ್ನು ಹೊಂದಿರುತ್ತದೆ. ಬಾತುಕೋಳಿ ಮರಿಗಳು ಹಳದಿ ಬಣ್ಣದ ಪುಕ್ಕಗಳನ್ನು ಹೊಂದಿರುತ್ತವೆ. ಅವು ಗಡುಸಾಗಿದ್ದು, ಹವಾಮಾನ ಮತ್ತು ರೋಗನಿರೋಧಕವಾಗಿದೆ. ಇವು ವೇಗವಾಗಿ ಬೆಳೆಯುವುದರಿಂದ ಮಾಂಸದ ಉತ್ಪಾದನೆಗೆ ಅತ್ಯುತ್ತಮವಾಗಿದ್ದು, ನಿರ್ವಹಣೆಯೂ ಸುಲಭವಾಗಿದೆ. 



 

ಒಂದು ದಿನದ ಬಾತುಕೋಳಿ ಮರಿಗಳು ಸರಾಸರಿ 40-50 ಗ್ರಾಂ ಇದ್ದು, ಪೂರ್ಣವಾಗಿ ಬೆಳೆದ ಹಕ್ಕಿ 8 ವಾರಗಳಲ್ಲಿ ಸುಮಾರು 2-2.5 ಕೆಜಿ ತೂಕವಿರುತ್ತದೆ. ಸುಮಾರು 40-45 ದಿನಗಳಲ್ಲಿ, ಬಾತುಕೋಳಿಗಳು ಮೊಟ್ಟೆ ಇಡಲು ಸಿದ್ಧವಾಗುತ್ತವೆ. ಇವುಗಳ ವಾರ್ಷಿಕ ಮೊಟ್ಟೆ ಉತ್ಪಾದನೆ 15-200. ಇವುಗಳ ಆಹಾರ ಪರಿವರ್ತನೆ ಅನುಪಾತ 1:2.3-2.7 ರಷ್ಟಿದೆ.

 

ಬಾತುಕೋಳಿ ಮೊಟ್ಟೆಗಳು ಉತ್ತಮ ಪ್ರಮಾಣದ ಪ್ರೋಟೀನ್ ಮೂಲವಾಗಿದ್ದು, ಇವು ಕೋಳಿಮೊಟ್ಟೆಗಿಂತ ಹೆಚ್ಚು ಪೌಷ್ಟಿಕಾಂಶ ಹೊಂದಿರುತ್ತದೆ. ಬಾತುಕೋಳಿ ಮೊಟ್ಟೆಗಳು ಹೆಚ್ಚಿನ ಪ್ರಮಾಣದ ವಿಟಮಿನ್ ಗಳು ಹಾಗೂ ಖನಿಜಗಳನ್ನು ಹೊಂದಿರುತ್ತದೆ. ಇವು ರಕ್ತದ ಕೋಶ ರೂಪುಗೊಳ್ಳುವಿಕೆ, ಡಿ ಎನ್ ಎ ಅನುರೂಪತೆ ಮತ್ತು ನರಗಳು ಉತ್ತಮವಾಗಿ ಕೆಲಸ ಮಾಡಲು ಅಗತ್ಯವಾದ ವಿಟಮಿನ್ ಬಿ12 ನ ದೈನಂದಿನ ಅಗತ್ಯವನ್ನು ಪೂರೈಸುತ್ತದೆ ಎನ್ನುವುದು ಗಮನಿಸಬೇಕಾದ ಸಂಗತಿ. ಬಾತುಕೋಳಿಗಳ ಮಾಂಸ ಪ್ರೋಟಿನ್ ಮತ್ತು ಆರೋಗ್ಯಕರ ಕೊಬ್ಬು ಮತ್ತು ಸೆಲೆನಿಯಂ, ಕಬ್ಬಿಣ, ಮತ್ತು ನಯಾಸಿನ್ ನಂತಹ ಸೂಕ್ಷ್ಮಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ. ಇದು ರೋಗನಿರೋಧಕ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ ಮತ್ತು ಥೈರಾಯ್ಡ್ ಆರೋಗ್ಯಕ್ಕೆ ಉತ್ತಮವಾಗಿದೆ. 



 

ಬಾತುಕೋಳಿಗಳ ಬೆಳವಣಿಗೆಯ ಅವಧಿಯಲ್ಲಿ ನಿಗದಿಪಡಿಸಲಾದ ಲಸಿಕೆಯ ವಿವರಗಳು ಕೆಳಗಿನಂತಿವೆ: 30 ನೇ ದಿನದಲ್ಲಿ, ಬಾತುಕೋಳಿಗಳಿಗೆ ಡಕ್ ಕಾಲೆರಾ ಲಸಿಕೆ ಮತ್ತು ಸಬ್ಕ್ಯುಟೇನಿಯಸ್ (ಚರ್ಮದ ಅಡಿಭಾಗ) ಇಂಜೆಕ್ಷನ್ ನೀಡಲಾಗುತ್ತದೆ. ನಂತರ 35-40 ದಿನಗಳ ನಡುವೆ, ಡಕ್ ವೈರಲ್ ಹೆಪಟೈಟಿಸ್ ಮತ್ತು ಸಬ್ ಕ್ಯುಟೇನಿಯಸ್ (ಚರ್ಮದ ಅಡಿಭಾಗ) ಇಂಜೆಕ್ಷನ್ ಅನ್ನು ಬಾತುಕೋಳಿಗಳಿಗೆ ನೀಡಲಾಗುತ್ತದೆ. ಸುಮಾರು 45-50 ದಿನಗಳಲ್ಲಿ, ಡಕ್ ಪ್ಲೇಗ್ ಲಸಿಕೆಯನ್ನು ಸಬ್ ಕ್ಯುಟೇನಿಯಸ್ (ಚರ್ಮದ ಅಡಿಭಾಗ) ಇಂಜೆಕ್ಷನ್ ನೊಂದಿಗೆ ನೀಡಲಾಗುತ್ತದೆ. ಇವುಗಳನ್ನು ತರಬೇತಿ ಪಡೆದ ಟೆಕ್ನಿಷಿಯನ್ ಅಥವಾ ಪಶುವೈದ್ಯರ ಮೇಲ್ವಿಚಾರಣೆಯಲ್ಲಿ ನೀಡಲಾಗುತ್ತದೆ. ಪಶುವೈದ್ಯರು ಶಿಫಾರಸು ಮಾಡಿದಂತೆ 2 ತಿಂಗಳಿಗೊಮ್ಮೆ ಜಂತುಹುಳ ನಿರೋಧಕ ಔಷಧಿ ನೀಡಲಾಗುತ್ತದೆ. 


"Aqgromalin provides quality chicks from certified and hygienic hatcheries. You can order from our website (aqai.in) or from the AQAI app - "


Get it on Google Play
Get it on App Store
Share -
Added to cart
- There was an error adding to cart. Please try again.
Quantity updated
- An error occurred. Please try again later.
Deleted from cart
- Can't delete this product from the cart at the moment. Please try again later.